12th March 2025
ಹಾಸನ: ಚನ್ನರಾಯಪಟ್ಟಣ ತಾಲೂಕು ಕಬ್ಬಳಿ ಗ್ರಾಮದ ಕಟ್ಟೆಗೆ ಹಾರಿ ತಾಯಿ-ಮಗ
ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಜೋಡಿ ಸಾವಿಗೆ ಪತ್ನಿ/ಸೊಸೆಯ ಮಾನಸಿಕ ಹಿಂಸೆ ನೀಡಿಲ್ಲ. ಬದಲಾಗಿ ಮಾನ
ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾರೆ ಎಂಬ ಅಂಶ ಇದೀಗ ಬಯಲಾಗಿದೆ.
ಹೆಚ್ಐವಿ ಸೋಂಕಿತ: ಇಬ್ಬರ ಸಾವಿನ ನಂತರ ಹೊರ ಬಿದ್ದಿರುವ ಸ್ಫೋಟಕ ಸಂಗತಿ
ಏನೆಂದರೆ ಮೃತ ಭರತ್ ಹೆಚ್ಐವಿ ಸೋಂಕಿತನಾಗಿದ್ದ ಎಂಬುದು. ಇದನ್ನು ಸ್ವತಃ ಪತ್ನಿ
ಗೀತಾ ಕುಟುಂಬದವರು ಬಹಿರಂಗ ಪಡಿಸಿದ್ದಾರೆ.
ಭರತ್ಗೆ ೪ ಲಕ್ಷ ವರದಕ್ಷಿಣೆ, ೧೦೦ ಗ್ರಾಂ. ಚಿನ್ನ ನೀಡಿ ಅದ್ಧೂರಿಯಾಗಿ ೮ ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆತ ೩ ವರ್ಷಗಳಿಂದಲೇ ಹೆಚ್ಐವಿ ಸೋಂಕಿತನಾಗಿದ್ದ, ಇದನ್ನು ಮುಚ್ಚಿಟ್ಟು ಮಾತ್ರೆ ತೆಗೆದುಕೊಳ್ಳುತ್ತಿದ್ದ. ತನಗೆ ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಎಂದು ಗಂಭೀರ ಆರೋಪ ಮಾಡಿದರು. ಇದರಿಂದ ನಮ್ಮ ಹುಡುಗಿಗೆ ಅನ್ಯಾಯ ಆಗಿದ್ದು, ನ್ಯಾಯಕೊಡಿಸಿ ಎಂದು ಮನವಿ ಮಾಡಿದರು.
ಹೀಗಿದ್ದರೂ ಪತ್ನಿ ಜೊತೆ ಆರಂಭದಲ್ಲಿ ಸಂಸಾರ ಮಾಡಿದ್ದಾನೆ. ನಂತರದಲ್ಲಿ ಅಂತರ ಕಾಯ್ದುಕೊಂಡಿದ್ದ. ಆಕೆ ಜೊತೆ ಸೇರುತ್ತಿರಲಿಲ್ಲ.
ಗೀತಾಳ ಮೇಲೆಯೇ ಆರೋಪ: ಅದಕ್ಕೂ ಮುನ್ನ ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ಗೀತಾ ಹೆಣ್ಣೇ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದೆಲ್ಲ ಭರತ್ ಹಾಗೂ ಸಂಬಂಧಿಕರು ಆರೋಪ ಹೊರಿಸಿದ್ದರು.
ಕೆಲ ದಿನ ಸಂಬಂಧಿಕರ ಮನೆಯಲ್ಲಿ ಗೀತಾಳನ್ನು ಉಳಿಸಿದ್ದ. ಮತ್ತೊಂದು ಪಂಚಾಯ್ತಿ ನಡೆಸಿ ಹಿರಿಯರು ಬುದ್ಧಿವಾದ ಹೇಳಿದ ನಂತರ ಗೀತಾ ಗಂಡನ ಮನೆಯಲ್ಲಿ ಇರುವುದಾಗಿ ಹೇಳಿದ್ದಳು. ಅಲ್ಲೀವರೆಗೂ ಪತಿಯ ಮಹಾಪರಾಧ ತಿಳಿದಿರಲಿಲ್ಲ. ಗೀತಾ ಏನೂ ಮಾತನಾಡದೇ ಇದ್ದರೂ, ತವರು ಮನೆಗೆ ಕಳಿಸಿದ್ದರು.

ಬಯಲಾಗಿದ್ದು ಹೇಗೆ: ಭರತ್ ಹೆಚ್ಐವಿ ಮಾತ್ರೆ ಡಬ್ಬಿಯನ್ನು ಕೊರಳಿಗೆ ಕಟ್ಟಿಕೊಂಡು ತಿರುತ್ತಿದ್ದ. ಹೀಗೇಕೆ ಎಂದು ಅನುಮಾನ ಬಂದಿತ್ತು. ಸಮಯ ಕಾದು ಆತ ಸ್ನಾನಕ್ಕೆ ಹೋಗಿದ್ದಾಗ ಮಾತ್ರೆ ಹಾಗೂ ಚೀಟಿಯ ಫೋಟೋ ತೆಗೆದ ಗೀತಾ, ಅದನ್ನು ತನ್ನ ಅಕ್ಕನಿಗೆ ಕಳಿಸಿದ್ದಳು. ಅದನ್ನು ಪರಿಚಯ ಇರುವ ನರ್ಸ್ಗೆ ತೋರಿಸಿದಾಗ ಭರತ್ ಹೆಚ್ಐವಿ ಸೋಂಕಿತ ಎಂಬ ಗುಟ್ಟು ರಟ್ಟಾಯಿತು. ಇದನ್ನು ಗೀತಾ ಮನೆಯವರು ಅನೇಕರಿಗೆ ತಿಳಿಸಿದರು.
ಮತ್ತೊಂದು ಪಂಚಾಯ್ತಿ: ಬಳಿಕ ಊರಿನವರು, ಸಂಬಂಧಿಕರು ಸೇರಿ ಎರಡೂ ಕಡೆಯವರು ಪಂಚಾಯ್ತಿಗೆ ಬರಬೇಕು. ಭರತ್ ಆಧಾರ್ ಕಾರ್ಡ್ ತರಬೇಕು, ಇಬ್ಬರೂ ಮೆಡಿಕಲ್ ಟೆಸ್ಟ್ಗೆ ಒಳ ಪಡಬೇಕು ಎಂದು ಸೋಮವಾರ ಮತ್ತೊಂದು ಪಂಚಾಯ್ತಿ ನಿಗದಿ ಮಾಡಿದ್ದರು.
ಅಲ್ಲೀವರೆಗೂ ಭರತ್ ಆಧಾರ್ ಕಾರ್ಡ್ ಯಾರಿಗೂ ಕೊಡದೆ ಸತಾಯಿಸಿದ. ಪಂಚಾಯ್ತಿ ನಡೆದರೆ ತಾನು ಮುಚಿಟ್ಟಿದ್ದ ಎಲ್ಲವೂ ಬಯಲಾಗಲಿದೆ ಎಂದು ಮಾ.೯ ರಂದು ರಾತ್ರಿ ಬೆಂಗಳೂರಿನಿಂದ ಬಂದು, ತಾಯಿ ಜೊತೆ ಡಿಗಡದ ಸಂಬಂಧಿಕರ ಮನೆಗೆ ಹೋಗಿ ಬೈಕ್ ಪಡೆದು ಮನೆಗೆ ಬಂದಿದ್ದಾರೆ. ಅಲ್ಲಿಂದ ೧೦೦ ಗ್ರಾಂ ಒಡವೆ, ೩೦ ಗ್ರಾಂ ಚೈನು ಎಲ್ಲವನ್ನೂ ಅಜ್ಜಿಗೆ ಕೊಟ್ಟು ಅವರ ಆಶೀರ್ವಾದ ಪಡೆದು ಮರಳಿ ಗ್ರಾಮಕ್ಕೆ ಬಂದು ಮಾ.೧೦ ರ ಮುಂಜಾನೆ ೩.೧೫ ರಿಂದ ೪ ಗಂಟೆ ನಡುವೆ ಗ್ರಾಮದ ನೀರಿನ ಕಟ್ಟೆಗೆ ಬಿದ್ದು ಮೃತಪಟ್ಟಿದ್ದಾರೆ.
ಇದಕ್ಕೂ ಮುನ್ನ ತಾಯಿ-ಮಗ ಗ್ರಾಮದ ದೇಗುಲದ ಮುಂದೆ ಕೈ ಮುಗಿದು ಕಟ್ಟೆ ಕಡೆಗೆ ನಡೆದು ಹೋಗಿರುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಗಳವಾರ ಬೆಳಿಗ್ಗೆ ೮ ಗಂಟೆಯಾದರೂ ಮನೆಯ ಬಾಗಿಲು ತೆರೆಯದೆ ಇದ್ದುದರಿಂದ ಅಕ್ಕಪಕ್ಕದವರು ಬಂದು ನೋಡಿದಾಗ ಒಳಗೆ ಯಾರೂ ಇರಲಿಲ್ಲ. ಡೆತ್ನೋಟ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಾತ್ರಿ ಪಡಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರ ತೆಗೆದರು. ಬಳಿಕ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ತಿಗಾಗಿ ಆರೋಪ: ಭರತ್ ಕುಟುಂಬಕ್ಕೆ ಸೇರಿದ ೧೫೦ ತೆಂಗಿನ ಮರ, ೨ ಎಕರೆ ಹೊಲ ಮತ್ತು ೧ ಮನೆಗಾಗಿ ಆತನ ಸಂಬಂಧಿಕರು ಹುಡುಗಿ ಮೇಲೆ ಆರೋಪ ಹೊರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಂಬಂಧಿಕರ ಕಣ್ಣೀರು: ಅತ್ತ ಭರತ್ನಿಂದ ನಮ್ಮ ಹುಡುಗಿ ಬಾಳು ಹಾಳಾಗಿದೆ ಎಂದು
ಕಣ್ಣೀರು ಜೊತೆಗೆ ಸಿಟ್ಟು ಹೊರ ಹಾಕಿದರು. ಇದೇ ಕಾರಣಕ್ಕೆ ಆತ ತನ್ನ ಆಧಾರ್ ಕಾರ್ಡನ್ನೂ ಗೌಪ್ಯವಾಗಿಟ್ಟು, ಪತ್ನಿಯೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದ ಎಂದರು. ಗೀತಾಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೆಚ್ಐವಿ ನೆಗೆಟಿವ್ ಬಂದಿದೆ. ಮುಂದೆ ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅವರ ಸಾವಿಗೆ ಯಾವುದೇ ರೀತಿಯಲ್ಲೂ ನಮ್ಮ ಹುಡುಗಿ ಗೀತಾ ಕಾರಣಳಲ್ಲ ಎಂದು ಸ್ಪಷ್ಟಪಡಿಸಿದರು.
ಹಿರೀಸಾವೆ ವರದಿ: ಇದಕ್ಕೂ ಮುನ್ನ ಗೀತಾಳ ಮಾನಸಿಕ ಕಿರುಕುಳ, ಹಠಮಾರಿತನ ಹಾಗೂ ತವರು ಮನೆ ಸೇರಿದ್ದರಿಂದ ಮನನೊಂದು ನೀರಿನ ಕಟ್ಟೆಗೆ ಹಾರಿ ಜಯಂತಿ(೬೦), ಭರತ್(೩೫) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಎಂಟು ತಿಂಗಳ ಹಿಂದೆ ಗಂಡಸಿ ಹೋಬಳಿ ಬಾಗೂರನಹಳ್ಳಿಯ ಗೀತಾ ಮತ್ತು ಭರತ್ ನಡುವೆ ಮದುವೆ ಆಗಿತ್ತು. ಆರಂಭದಿಂದಲೇ ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ. ಒಂದೆಡೆ ಗಂಡ-ಹೆಂಡತಿ, ಮತ್ತೊಂದೆಡೆ ಅತ್ತೆ-ಸೊಸೆ ನಡುವೆಯೂ ಜಗಳ ಆಡುತ್ತಿದ್ದರು. ಹೊಂದಿಕೊಂಡು ಹೋಗದ ಗೀತಾ, ತವರು ಮನೆ ಸೇರಿದ್ದಳು ಎನ್ನಲಾಗಿತ್ತು.
ಕಳೆದ ಫೆ.೨೨ ಮತ್ತು ಮಾ.೮ ರಂದು ಸಂಬಂಧಿಕರಾದ ರಮೇಶ್, ಅಶೋಕ್ ಹಾಗೂ ಗ್ರಾಮದ ಹಿರಿಯರು ಸೇರಿ ಒಂದಲ್ಲ, ಎರಡು ಬಾರಿ ರಾಜಿ ಪಂಚಾಯ್ತಿ ಮಾಡಿ ಗೀತಾಳ ಮನವೊಲಿಸುವ ಪ್ರಯತ್ನ ಮಾಡಿದರೂ, ಆಕೆ ಮಣಿದಿರಲಿಲ್ಲ ಎನ್ನಲಾಗಿತ್ತು.
ಬ್ಲರ್ಬ್
ಡೆತ್ನೋಟ್ನಲ್ಲಿ ಏನಿದೆ
ಭರತ್ ಸಾಯುವ ಮುನ್ನ ಬರೆದಿಟ್ಟಿರುವ ಡೆತ್ನೋಟ್ನಲ್ಲಿ ನಾನು ಮದುವೆ ಆಗಿರುವ
ಗೀತಾ, ನಮ್ಮ ಕರ್ಮ ಮಾಡಬಾರದು ಮತ್ತು ನಾವು ಕ?ಪಟ್ಟು ಕಟ್ಟಿರುವ ಮನೆಯೊಳಗೆ ಆಕೆ ಬರಬಾರದು ಮತ್ತು ನಮ್ಮ ಕರ್ಮಗಳನ್ನು ಆ ಮುಂಡೆ ಮಾಡಬಾರದು ಎಂದು ಬರೆದಿದ್ದ.